Thursday, 15 March 2012

ಬಸವಣ್ಣನವರನ್ನೂ ಭ್ರಷ್ಟಾಚಾರದಲ್ಲಿ ಪಾಲುದಾರರನ್ನಾಗಿಸಿದ ಕಥೆ

ಸ್ವಾಭಿಮಾನಿ ! ಶ್ರೀರಾಮುಲುರವರು ಗದುಗಿನ ತೊಂಟದಾರ್ಯ ಸ್ವಾಮೀಜೀಗಳ ಎದುರು ಕುಳಿತುಕೊಂಡು
ತಾವು ಬಿಜೆಪಿಗಾಗಿ ಇಷ್ಟಿಷ್ಟು ಕೋಟಿಗಳನ್ನು ಇಷ್ಟಿಷ್ಟು ದಿನಗಳ ಲೆಕ್ಕದಲ್ಲಿ ತಿಂಗಳುಗಳ ಲೆಕ್ಕದಲ್ಲಿ ಕೊಟ್ಟಿರುವುದಾಗಿಯೂ, ತನ್ನಲ್ಲಿದ್ದ 5 ಕೋಟಿ ಹಣವನ್ನೂ ಸಹ ದಾನ ಮಾಡಿರುವುದಾಗಿ,
ಸ್ವಾಮೀಜೀಗಳ ಮುಂದೆ ಹೇಳಿಕೊಂಡಿದ್ದಾರೆ.


ಎಂಬ ಸುದ್ದಿ ವಿಡಿಯೋ ಚಿತ್ರದ ಮೂಲಕ  ಟಿವಿ9 ವರದಿ ಮಾಡಿದೆ.
ಶ್ರೀರಾಮುಲು ಬಗ್ಗೆ ತೊಂಟದಾರ್ಯ ಸ್ವಾಮೀಜಿಗಳು ಗುಣಗಾನ ಮಾಡುತ್ತಾ, ಶ್ರೀರಾಮುಲುರವರ ದಾನ ಧರ್ಮದ ಬಗ್ಗೆ ಕೊಂಡಾಡಿದ್ದಾರೆ.

ಇಷ್ಟು ವರ್ಷ ಯಾವುದೇ ರಾಜಕಾರಣಿಗಳು ಮಾಡಲಾರದ ಕೆಲಸವನ್ನು ಶ್ರೀರಾಮುಲು ಮಾಡಿದ್ದಾರೆ.
"ಶ್ರೀ ಬಸವಣ್ಣ"ನ ಪುತ್ಥಳಿಗೆ 7 ಕೋಟಿಗಳನ್ನು ದಾನವಾಗಿ ಕೊಟ್ಟಿದ್ದಾರೆ ಎಂದೂ ಹಾಗೂ ಮಠಕ್ಕೆ ಶ್ರೀರಾಮುಲುರವರು ಕೊಟ್ಟಂತಹ ಹಣದ ವಿವರಗಳನ್ನು ಪುಸ್ತಕದ ರೂಪದಲ್ಲಿ ಬರೆದಿಟ್ಟಿದ್ದು ಶ್ರೀರಾಮುಲು ರವರಿಗೆ ತೋರಿಸಿ ಖುಷಿ ಪಟ್ಟುಕೊಂಡಿದ್ದಾರೆ.


ಈ ಎಲ್ಲಾ ವರದಿಗಳು ಟಿವಿ9 ಪ್ರಸಾರದ ಮಾಡಿದ್ದು ನಿಜವೇ ಆಗಿದ್ದಲ್ಲಿ......

* ತನಗೆ ಯಾವುದೇ ಗಣಿ ವ್ಯವಹಾರವಿಲ್ಲ. ಸಾಮಾನ್ಯ ವ್ಯಕ್ತಿ ಎಂದು ಹೇಳಿಕೊಳ್ಳುವ ಶ್ರೀರಾಮುಲುರವರಿಗೆ ಇಷ್ಟೊಂದು ಕೋಟಿಗಟ್ಟಲೇ ಹಣ ದಾನ ಮಾಡಲು ಹಣ ಬಂದ ಮೂಲ ಯಾವುದು?

* ತನ್ನ ಸ್ನೇಹಿತ ಜನಾರ್ಧನ ರೆಡ್ಡಿಯವರಿಂದ ಹಣ ಪಡೆದು ದಾನ ಧರ್ಮ ಮಾಡಿದ್ದರೆ,
(ಅಕ್ರಮ ಸಂಪಾದನೆಯ ಆಪಾದನೆಯ ಮೇರೆಗೆ ಸಿಬಿಐ ಕಸ್ಟಡಿಯಲ್ಲಿದ್ದಾರೆ ಜನಾರ್ಧನ ರೆಡ್ಡಿಯವರು)
ಅವರು ಮಾಡಿದ ಅಷ್ಟೂ ಹಣವೂ ಅವ್ಯವಹಾರದಿಂದ ಬಂದ ಹಣವೇ ಅಲ್ಲವೇ?


ಅವ್ಯವಹಾರದಿಂದ ಸಂಪಾದಿಸಿದ ಹಣವನ್ನು ದಾನ ಮಾಡಿ ಸೈ ಎನ್ನಿಸಿಕೊಳ್ಳುತ್ತಿರುವ ನಾಯಕರು
"ದಾನದ" ಮಹತ್ವವನ್ನೇ  ಕಳೆದಿದ್ದಾರೆ.
ಸ್ವಂತ ದುಡಿಮೆಯಲ್ಲಿ 1 ರೂ ದಾನ ಮಾಡಿದರೂ ಅದು ಶ್ರೇಷ್ಠವಾಗುತ್ತೆ.

ಈ ಅಕ್ರಮ ಹಣ, ಅವ್ಯವಹಾರದ ಹಣದಿಂದ ದಾನ ಮಾಡಿದ್ದು ಅದು ಹೇಗೆ ಶ್ರೇಷ್ಠ ದಾನವಾಗುತ್ತೆ.

* ಗದುಗಿನ ತೊಂಟದಾರ್ಯ ಸ್ವಾಮೀಜಿಗಳು "

ತಮ್ಮ ಮಠಕ್ಕೆ ಶ್ರೀರಾಮುಲುರವರಿಂದ ಪಡೆದ ಹಣವೂ ಅಕ್ರಮ, ಅವ್ಯವಹಾರದಿಂದಲೇ ಬಂದಿದ್ದಾಗಿರುವುದರಿಂದ ಮಠ ಸ್ವೀಕರಿಸಿದ ದಾನದ ರೂಪದಲ್ಲಿ ಪ್ರತಿಯೊಂದು ವಸ್ತುವು ಅಕ್ರಮದ್ದು. ಅಂದರೆ ಗದುಗಿನ ಮಠವೂ ಅವರ ಅವ್ಯವಹಾರ, ಅಕ್ರಮಗಳಲ್ಲಿ ಪಾಲುದಾರರೇ ಆಗುತ್ತಾರೆ.


* 7 ಕೋಟಿ ದಾನ ಪಡೆದು "ಶ್ರೀ ಬಸವಣ್ಣನ  ಪುತ್ಥಳಿ" ಸ್ಥಾಪಿಸಿದ ಕೀರ್ತಿ ಶ್ರೀ ರಾಮುಲು ಮತ್ತು ಸಂಗಡಿಗರಿಗೆ ಸಲ್ಲಿಕೆಯಾದರೆ. ಅದರ ಪಾಲು ಶ್ರೀ ಮಠಕ್ಕೂ ಸೇರುತ್ತದೆ.
ಅಂದರೆ "ಶ್ರೀ ಬಸವಣ್ಣನು ಮೂರ್ತಿಯಾಗಿ ನಿಂತಿರುವುದು ಈ ಅಕ್ರಮ, ಅವ್ಯವಹಾರ, ಭ್ರಷ್ಟಾಚಾರದ ಹಣದಿಂದಲೇ ಹೌದಾದರೆ.. ಅಲ್ಲಿಗೆ " ಜಗತ್ತಿನ ಶ್ರೇಷ್ಠ ಮಾನವ ಬಸವಣ್ಣನವರು  ಈ ಅವ್ಯವಹಾರಗಳಲ್ಲಿ ಭಾಗಿಗಳಾಗಿದ್ದಾರೆ ಅನ್ನಿಸುವುದಿಲ್ಲವೇ?

ಸತ್ಯ ನ್ಯಾಯ ನೀತಿ ಧರ್ಮದ ಹೆಸರಿನಲ್ಲಿ ನಡೆಯಬೇಕಾದ ಧರ್ಮ ಸಂಸ್ಥೆಗಳು, ಹಣ ದಾನವಾಗಿ ಕೊಟ್ಟಿದ್ದಾರೆ ಎಂಬ ಮಾತ್ರಕ್ಕೆ ಎಲ್ಲ ಮೌಲ್ಯಗಳನ್ನು ಕಳೆದುಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎನ್ನಿಸುತ್ತದೆ.

ಇಲ್ಲಿ ಹಣ ಕೊಡುವ ನಾಯಕರು, ಹಣ ಪಡೆಯುವ ಜನರು, ನ್ಯಾಯ ನೀತಿ ಧರ್ಮವನ್ನು ಬದಿಗಿಟ್ಟು ಹಣಕ್ಕೆ ಪ್ರಾಮುಖ್ಯತೆ ಕೊಡುವ ಮಠಾಧೀಶರುಗಳು ಅವರೆಲ್ಲರ ಅಕ್ರಮಗಳಲ್ಲಿ ಪಾಲುದಾರರಾಗುತ್ತಿದ್ದಾರೆ.

ಜೊತೆಗೆ "ಕ್ರಾಂತಿ ವೀರ ಬಸವಣ್ಣ"ರನ್ನು ಬಿಡುತ್ತಿಲ್ಲ.

ಹೀಗಾಗುತ್ತಿದೆ ನಮ್ಮ ಭಾರತ.

ರಾಜು ವಿನಯ್ ದಾವಣಗೆರೆ

 

No comments:

Post a Comment